ಶಾಲಾ ಶಿಕ್ಷಣ ಇಲಾಖೆ ಉಡುಪಿ, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ, ಡಾ. ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಒನ್ ಗುಡ್ ಸ್ಟೆಪ್ ಬೆಂಗಳೂರು ಇದರ ಸಹಯೋಗದಲ್ಲಿ ‘ಮದ್ಯ ವ್ಯಸನಿಗಳ ಮಕ್ಕಳ ಜಾಗೃತಿ’ ಸಪ್ತಾಹ 2023 ದ ಪ್ರಯುಕ್ತ ಶಾಲಾ ಶಿಕ್ಷಕ ಶಿಕ್ಷಕಿಯರಿಗೆ ‘ಸ್ಕೂಲ್ ಮೆಂಟಲ್ ಹೆಲ್ತ್’ ನ ಬಗ್ಗೆ ಕಾರ್ಯಗಾರವು 13 /2/ 2024 ಮಂಗಳವಾರದಂದು ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ ಜರುಗಿತು. ಈ ಕಾರ್ಯಗಾರದ ಉದ್ಘಾಟನೆಯನ್ನು ವಿದ್ಯೋದಯ ಟ್ರಸ್ಟ್ ನ ಜತೆ ಕಾರ್ಯದರ್ಶಿಯಾಗಿರುವ ಶ್ರೀಮತಿ ರೂಪ ಬಲ್ಲಾಳ್ ಮತ್ತು ಮಾನಸಿಕ ತಜ್ಞರಾದ ಡಾಕ್ಟರ್ ಪಿ.ವಿ ಭಂಡಾರಿಯವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾನಸಿಕ ತಜ್ಞರುಗಳಾದ ಡಾಕ್ಟರ್ ಫಿಲಿಪ್ ಜಾನ್, ಡಾ. ಅಶೋಕ್ ಕಾಮತ್, ಡಾಕ್ಟರ್ ವಿರೂಪಾಕ್ಷ ದೇವರ ಮನೆ ಹಾಗೂ ಕೊರ್ಗಿ ಶಂಕರನಾರಾಯಣ ಉಪಧ್ಯಾಯ ಜೊತೆಗೆ ಒನ್ ಗುಡ್ ಸ್ಟೆಪ್ ನ ಸಂಸ್ಥಾಪಕರಾದ ಅಮಿತಾ ಪೈ ಹಾಗೂ ವಿದ್ಯೋದಯ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಪಿ. ರಾಜ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾಕ್ಟರ್ ಫಿಲಿಪ್ ಜಾನ್ ಇವರು ‘ಕಲಿಕಾ ಸಾಮರ್ಥ್ಯದ ದೌರ್ಬಲ್ಯದ ಕಾರಣಗಳು ಮತ್ತು ಅದರ ಪರಿಹಾರಗಳು’ ಎಂಬುದರ ಬಗ್ಗೆ ಬಹಳಷ್ಟು ಮಾಹಿತಿಯನ್ನು ತಿಳಿಸಿದರು.
ಡಾಕ್ಟರ್ ಅಶೋಕ್ ಕಾಮತ್ ಇವರು ‘ವಿದ್ಯಾರ್ಥಿಗಳ ಸಾಧನೆಯ ಕೊರತೆ ಮತ್ತು ಪರಿಹಾರೋಪಾಯಗಳು’ ಎಂಬ ವಿಷಯದ ಬಗ್ಗೆ ವಿವರಿಸಿ ಹೇಳಿದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಇವರು ‘ಭಾಷಾ ಶುದ್ಧತೆ ಹಾಗೂ ಅದರ ಬಳಕೆ ಹೇಗೆ?’ ಎಂಬುದನ್ನು ಬಹಳಷ್ಟು ಚೆನ್ನಾಗಿ ತಿಳಿಯಪಡಿಸಿದರು. ಡಾ. ವಿರೂಪಾಕ್ಷ ದೇವರಮನೆ ಇವರು ‘ಮದ್ಯವಸನಿಗಳ ಮಕ್ಕಳ ಬಗ್ಗೆ’ ಸವಿವರವಾಗಿ ವಿವರಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಡಾ. ವಿರೂಪಾಕ್ಷ ದೇವರಮನೆ ನೆರವೇರಿಸಿದರು. ವಿದ್ಯೋದಯ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಪಿ.ರಾಜ್ ರವರು ವಂದನಾರ್ಪಣೆ ಗೈದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸೌಜನ್ಯಶೆಟ್ಟಿ ಮತ್ತು ಶ್ರೀಮತಿ ಪದ್ಮ ರಾಘವೇಂದ್ರ ಇವರು ಬಹಳ ಚೆನ್ನಾಗಿ ನಿರ್ವಹಿಸಿದರು.
ಉಡುಪಿ ಜಿಲ್ಲೆಯ 200 ಶಾಲೆಗಳ ಶಿಕ್ಷಕ ಶಿಕ್ಷಕಿಯರು ಈ ಕಾರ್ಯಗಾರದಲ್ಲಿ ಭಾಗವಹಿಸಿ, ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಂಡರು.