top of page
Writer's pictureVidyodaya

ಗೀತಾ ಜಯಂತಿಯ ಆಚರಣೆ


Geeta Jayanthi At vidyodaya Public School udupi

ಉಡುಪಿಯ ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ ಡಿಸೆಂಬರ್ 21ನೇ ತಾರೀಕಿನಂದು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಪಿ ರಾಜ್ ಅವರ ನೇತೃತ್ವದಲ್ಲಿ ಗೀತಾ ಜಯಂತಿ ಕಾರ್ಯಕ್ರಮವು ಬಹಳ ಅರ್ಥವತ್ತಾಗಿ ಮೂಡಿ ಬಂತು. ದೀಪ ಪ್ರಜ್ವಲನೆ, ಪುಷ್ಪಾಂಜಲಿ, ಶಂಖ ಘೋಷದೊಂದಿಗೆ ಕಾರ್ಯಕ್ರಮ ಆರಂಭವಾಯಿತು.


ಒಂದನೇ ತರಗತಿಯಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಭಗವದ್ಗೀತೆಯ ಕೆಲವು ಅಧ್ಯಾಯಗಳನ್ನು ಪಠಿಸಿದರು.

ಭಗವದ್ಗೀತೆ ನಮ್ಮ ಜೀವನದಲ್ಲಿ ನಿರ್ವಹಿಸುವ ಪಾತ್ರವನ್ನು ಹಾಗೂ ಭಕ್ತಿ ಮತ್ತು ಕರ್ಮ ಮಾರ್ಗಗಳಲ್ಲಿ ಕೃಷ್ಣಾರ್ಜುನರ ಸಂಭಾಷಣ ಉಪದೇಶವನ್ನು ಸಣ್ಣ ಪ್ರಹಸನಗಳ ಮೂಲಕ ವಿದ್ಯಾರ್ಥಿಗಳು ಪ್ರದರ್ಶಿಸಿದರು.


ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಭಗವದ್ಗೀತೆ ಪಠಿಸಿದರು. ಶಾಲಾ ಪ್ರಾಂಶುಪಾಲರು ಭಗವದ್ಗೀತೆಯು ಕತ್ತಲನಿಂದ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯಲಿರುವ ಮಾರ್ಗ ಎಂದು ಮಕ್ಕಳಿಗೆ ತಿಳಿಸಿದರು. ಶಾಲಾ ಆಡಳಿತ ಮಂಡಳಿ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶ್ರೀಮತಿ ಶುಭ ರಾವ್ ಅವರು ವಂದನಾರ್ಪಣೆ ಸಲ್ಲಿಸಿದರು. ಭಗವದ್ಗೀತಾ ಶಿಕ್ಷಕಿ ಶ್ರೀಮತಿ ದಿವ್ಯಶ್ರೀ ಇವರು ಕಾರ್ಯಕ್ರಮ ನಿರೂಪಿಸಿದರು.






413 views

Recent Posts

See All
bottom of page