
ವಿದ್ಯೋದಯ ಪಬ್ಲಿಕ್ ಸ್ಕೂಲ್, ಉಡುಪಿ ನಂಬರ್ 1, 2023 ಕನ್ನಡ ರಾಜ್ಯೋತ್ಸವ ಸಮಾರಂಭವು ಬಹಳ ವಿಜೃಂಭಣೆಯಿಂದ ನೆರವೇರಿತು. ಮಾನ್ಯ ಪ್ರಾಂಶುಪಾಲರಾದ ಅನಿತಾ ಪಿ.ರಾಜ್ ರವರು ಕನ್ನಡ ಶಿಕ್ಷಕಿಯರೊಂದಿಗೆ ಕನ್ನಡ ಭುವನೇಶ್ವರಿಗೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂಶುಪಾಲರಾದ ಅನಿತಾ ಪಿ.ರಾಜ್ ಮಕ್ಕಳನ್ನು ಉದ್ದೇಶಿಸಿ ಕನ್ನಡ ನಾಡು ನುಡಿಯ ಬಗ್ಗೆ ಮಾತನಾಡಿದರು. ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಭಾಷಣ ಹಾಗೂ ಸಂಗೀತ ಮೊದಲಾದ ಕಾರ್ಯಕ್ರಮಗಳು ಸೊಗಸಾಗಿ ಮೂಡಿ ಬಂದವು. ಕನ್ನಡ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಶೆಟ್ಟಿ ಅವರ ನೃತ್ಯ ಸಂಯೋಜನೆಯಿಂದ ನೃತ್ಯಗಳು ಅದ್ಭುತವಾಗಿ ಮೂಡಿಬಂದಿತ್ತು. ಕನ್ನಡ ಶಿಕ್ಷಕಿಯರಾದ ಶ್ರೀಮತಿ ಮಾಲತಿ, , ಶ್ರೀಮತಿ ಉಷಾ ಬಿ ಆಚಾರ್ಯ, ಶ್ರೀಮತಿ ಕ್ಷಮತ, ಶ್ರೀಮತಿ ಪೂಜಾ, ಶ್ರೀಮತಿ ಹರ್ಷಿತ ಹಾಗೂ ಶಿಕ್ಷಕಿಯರಾದ ಶ್ರೀಮತಿ ಪ್ರಿಯಾಂಕ, ಶ್ರೀಮತಿ ನಮೃತ ಮತ್ತು ಶ್ರೀಮತಿ ರಾಜೇಶ್ವರಿ ಈ ಕಾರ್ಯಕ್ರಮವು ಯಶಸ್ವಿಯಾಗುವಲ್ಲಿ ಸಹಕರಿಸಿದರು. ಅಲ್ಲದೆ ಎಲ್ಲಾ ಶಿಕ್ಷಕ ವೃಂದವು ಶಿಕ್ಷಕೇತರ ವರ್ಗವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕನ್ನಡ ಶಿಕ್ಷಕಿಯಾದ ಉಷಾ ಬಿ ಆಚಾರ್ಯ ಇವರು ಮಕ್ಕಳನ್ನು ಉದ್ದೇಶಿಸಿ ಎರಡು ಮಾತುಗಳನ್ನು ಆಡಿದರು. ವಿದ್ಯಾರ್ಥಿನಿಯಾದ ಕುಮಾರಿ ದೀಕ್ಷಾ ದಿನೇಶ್ ಕಾರ್ಯಕ್ರಮವನ್ನು ಸುಂದರವಾಗಿ ನಿರ್ವಹಿಸಿದುದಲ್ಲದೆ ಧನ್ಯವಾದಗಳನ್ನು ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಅಂದಿನ ಕಾರ್ಯಕ್ರಮವು ಮುಕ್ತಾಯಗೊಂಡಿತು.