ವಿದ್ಯೋದಯ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳಿಗೆ ಖ್ಯಾತ ರಂಗಕರ್ಮಿ ದಿವಾಕರ್ ಕಟೀಲ್ ನಿರ್ದೇಶನದಲ್ಲಿ ನೀಲಿ ಕುದುರೆ ನಾಟಕವೂ MGM ಕಾಲೇಜಿನ ರವೀಂದ್ರ ಮಂಟಪದಲ್ಲಿ 2 ಜನವರಿ 2025 ರಂದು ಪ್ರದರ್ಶನಗೊಂಡು ನೆರೆದವರ ಪ್ರಶಂಸೆ ಪಡೆಯಿತು. ರಂಗಭೂಮಿ ರಿ. ಉಡುಪಿ ಸಂಸ್ಥೆಯು 60 ವರ್ಷಗಳನ್ನು ಪೂರೈಸಿದ ಶುಭಾವಸರದಲ್ಲಿ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ರಂಗ ಶಿಕ್ಷಣವೂ ವಿದ್ಯಾರ್ಥಿಗಳಿಗೆ ದೊರಕಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ನೂರಿತ ನಿರ್ದೇಶಕರಿಂದ ನಾಟಕ ತರಬೇತಿಯನ್ನು ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗಿತ್ತು.
ಶಾಲಾ ಆಡಳಿತ ಮಂಡಳಿಯ ಜೊತೆ-ಕಾರ್ಯದರ್ಶಿ ರೂಪ ಬಲ್ಲಾಳ್, ಪ್ರಾಂಶುಪಾಲರಾದ ಅನಿತಾ ಪಿ ರಾಜ್, ಶಾಲಾ ಸಂಯೋಜಕಿ ಶುಭ ರಾವ್, ನಾಟಕ ಸಂಯೋಜಕ ಶಿಕ್ಷಕರಾದ ಸವಿತಾ ಆಚಾರ್ಯ, ಮೀರಾ, ಸುನಿಲ್ ಪಾಂಡೇಶ್ವರ ಸೇರಿದಂತೆ ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಕರು ಪ್ರದರ್ಶನ ವನ್ನು ಕಣ್ತುಂಬಿಕೊಂಡರು.